ತುಮಕೂರು ನಗರ ಅನಿಲ ವಿತರಣೆ

ಗೇಲ್‌ (ಇಂಡಿಯಾ) ಲಿಮಿಟೆಡ್ ಸಂಸ್ಥೆಯುಧಾಬೋಲ್-ಬೆಂಗಳೂರು ಪೈಪ್ ಲೈನ್‌ನ ಎಸ್.ವಿ-19 ನಿಂದ ಜಿಲ್ಲೆಯ ಟ್ಯಾಪ್-ಆಫ್ ವನ್ನು ತುಮಕೂರು ಜಿಲ್ಲೆಯ ದೇಶೀಯ, ಕೈಗಾರಿಕಾ, ಆಟೋಮೊಬೈಲ್ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ನೈಸರ್ಗಿಕ ಅನಿಲವನ್ನು ವಿತರಿಸಲಾಗುತ್ತದೆ.

ಗೊಳ್ಳಹಳ್ಳಿ ಗ್ರಾಮದ ಹತ್ತಿರ ಇರುವ ಎಸ್‌.ವಿ.-೧೯ನಿಂದ ದಿಬ್ಬೂರು, ಮರಳೂರುದಿನ್ನೆ, ಕ್ಯಾತಸಂದ್ರ, ಹಿರೆಯಹಳ್ಳಿ ಕೈಗಾರಿಕಾ ಪ್ರದೇಶ, ಅಂತ್ರಸನಹಳ್ಳಿ ಕೈಗಾರಿಕಾ ಪ್ರದೇಶ, ವಸಂತನರಸಾಪುರ ಕೈಗಾರಿಕಾ ಪ್ರದೇಶ, ಲಿಂಗಾಪುರ, ಕುಣಿಗಲ್‌ ಮತ್ತು ತುಮಕೂರು ನಗರಗಳಿಗೆ ನೈಸರ್ಗಿಕ ಅನಿಲವನ್ನು ವಿತರಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಪ್ರಥಮ ಹಂತದಲ್ಲಿ, ದಿಬ್ಬೂರು, ಮರಳೂರುದಿನ್ನೆ, ಕ್ಯಾತಸಂದ್ರ, ಹಿರೆಯಹಳ್ಳಿ ಮತ್ತು ಕುಪ್ಪೂರುಗಳಿಗೆ ಎಸ್‌.ವಿ.-೧೯ ನಿಂದ 24 ಕಿ.ಮಿ. ಸ್ಟೀಲ್‌ ಮತ್ತು ೮ ಕಿ.ಮಿ. ಎಂಡಿಪಿಇ ಪೈಪ್‌ಲೈನ್‌ ಅಳವಡಿಸಲಾಗುವುದು. ಅದನ್ನು ಜನವರಿ, 2018ರ ಅಂತ್ಯಕ್ಕೆ ಕಾರ್ಯಗತಗೊಳಿಸಲಾಗುವುದು.

ಎರಡನೇ ಹಂತದಲ್ಲಿ, ತುಮಕೂರು ನಗರದಿಂದ ಕುಣಿಗಲ್‌ ಪಟ್ಟಣದವರಿಗೆ ಮೇಲ್ಕಂಡ ನಾಲ್ಕು ಭಾಗಗಳಿಗೆ ನೈಸರ್ಗಿಕ ಅನಿಲವನ್ನು ವಿತರಿಸಲುಪೈಪ್‌ಲೈನ್‌ ಅಳವಡಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.