ಪಿಪಿಪಿ ಯೋಜನೆಗಳು
ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಎನ್ನುವುದು ಒಂದು ಸಾರ್ವಜನಿಕ ವಲಯದ ಸಂಸ್ಥೆ / ಪುರಸಭೆ ಮತ್ತು ಖಾಸಗಿ ಸಂಸ್ಥೆ ನಡುವಿನ ಒಪ್ಪಂದವಾಗಿದೆ. ಇದರಲ್ಲಿ ಖಾಸಗಿ ಸಂಸ್ಥೆಯು ವಿನ್ಯಾಸ, ಆರ್ಥಿಕ, ನಿರ್ಮಾಣ ಮತ್ತು ಕಾರ್ಯಾಚರಣೆಗಳಲ್ಲಿ ಗಣನೀಯ ಆರ್ಥಿಕ, ತಾಂತ್ರಿಕ ಮತ್ತು ಕಾರ್ಯಾಚರಣೆಯ ಅನಿಶ್ಚಿತತೆಯನ್ನು ಹೊಂದಿರುತ್ತದೆ.
ಸಾಂಪ್ರದಾಯಿಕವಾಗಿ, ಖಾಸಗಿ ವಲಯದ ಭಾಗವಹಿಸುವಿಕೆಯು ಪ್ರತ್ಯೇಕ ಯೋಜನೆ, ವಿನ್ಯಾಸ ಅಥವಾ ನಿರ್ಮಾಣ ಒಪ್ಪಂದಗಳಿಗೆ ಸೇವಾ ಆಧಾರದ ಶುಲ್ಕದ ಮೇಲೆ ಸೀಮಿತವಾಗಿದೆ. ಇದು ಸಾರ್ವಜನಿಕ ಸಂಸ್ಥೆಗಳ ವಿಶೇಷಣಗಳ ಮೇಲೆ ಆಧಾರಿತವಾಗಿದೆ.
ಖಾಸಗಿ ವಲಯದ ಪಾತ್ರವನ್ನು ವಿಸ್ತರಿಸುವುದರಿಂದ ಖಾಸಗಿ ಸಂಸ್ಥೆಗಳು ತಾಂತ್ರಿಕ, ಮ್ಯಾನೇಜ್ಮೆಂಟ್ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೊಂದಲು ಮತ್ತು ಕೆಲವು ಸಾರ್ವಜನಿಕ ಸಂಸ್ಥೆಯ ಗುರಿಗಳಾದ ಹೆಚ್ಚಿನ ವೆಚ್ಚ ಹಾಗೂ ವೇಳಾಪಟ್ಟಿ ನಿಶ್ಚಿತತೆ ಸಾಧಿಸಲು, ಒಳ-ಸಿಬ್ಬಂದಿ, ನವೀನ ತಂತ್ರಜ್ಞಾನದ ಅನ್ವಯಿಕೆಗಳನ್ನು, ವಿಶೇಷ ಪರಿಣತಿ ಅಥವಾ ಖಾಸಗಿ ಬಂಡವಾಳ ಆಕರ್ಷಿಸಲುಅವಕಾಶ ಕಲ್ಪಿಸುತ್ತದೆ. ಖಾಸಗಿ ಪಾಲುದಾರರು ಹೊಸ ಅಥವಾ ವಿಸ್ತರಿತ ಮತ್ತು ಅನಿಶ್ಚಿತತೆ ಜವಾಬ್ದಾರಿಗಳನ್ನು ಹೊಂದುವುದರಿಂದ ತನ್ನ ವ್ಯವಹಾರ ಅವಕಾಶಗಳನ್ನು ಹೆಚ್ಚಿಸಬಹುದು.
ಪಿಪಿಪಿಗಳು ಜವಾಬ್ದಾರಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡುತ್ತವೆ.ಯಾವ ಸಂಸ್ಥೆಗಳು ಚಟುವಟಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿಬೇಕಾದ ಫಲಿತಾಂಶವನ್ನು ನೀಡುವಅರ್ಹತೆ ಹೊಂದಿರುತ್ತದೆಯೋ ಅವುಗಳಿಗೆಜವಾಬ್ದಾರಿಗಳನ್ನುಹಂಚಿಕೆ ಮಾಡುತ್ತವೆ. ಪಿಪಿಪಿಗಳಲ್ಲಿ ಪಾತ್ರಗಳು, ಅನಿಶ್ಚಿತತೆ ಮತ್ತು ಪ್ರತಿಫಲಗಳು ಕರಾರಿನಲ್ಲಿ ಸೂಚಿಸುವ ಮೂಲಕ ಸಾಧಿಸಲಾಗುತ್ತದೆ.ಆದ್ದರಿಂದ ಗರಿಷ್ಟ ಸಾಧನೆ ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಬೇಕಾದ ಉತ್ತೇಜನಗಳನ್ನು ಒದಗಿಸುವುದು.
ಯಾವುದು ಪಿಪಿಪಿ ಆಗಿರುವುದಿಲ್ಲ
ಪಿಪಿಪಿ ವ್ಯಾಖ್ಯಾನವು ಇದನ್ನು ಸ್ಪಷ್ಟಪಡಿಸುತ್ತದೆ:
- ಒಂದು ಪಿಪಿಪಿಯು ಕಾರ್ಯಗಳ ಸರಳ ಹೊರಗುತ್ತಿಗೆ ಅಲ್ಲ.ಅದರಲ್ಲಿ ಗಣನೀಯ ಆರ್ಥಿಕ, ತಾಂತ್ರಿಕ ಮತ್ತು ಕಾರ್ಯಾಚರಣೆಯ ಅನಿಶ್ಚಿತತೆಯನ್ನು ಖಾಸಗಿ ಸಂಸ್ಥೆಯು ಉಳಿಸಿಕೊಳ್ಳುತ್ತದೆ.
- ಒಂದು ಸಾರ್ವಜನಿಕ ಸಂಸ್ಥೆಗೆ ಖಾಸಗಿ ಸಂಸ್ಥೆಯಿಂದ ಪಿಪಿಪಿಯು ದಾನವಲ್ಲ.
- ಪಿಪಿಪಿಯು ಒಂದು ಸಾರ್ವಜನಿಕ ಸ್ವಾಮ್ಯದ ಉದ್ಯಮವನ್ನು ರಚಿಸುವ ಮೂಲಕ ಸಾರ್ವಜನಿಕ ಕಾರ್ಯಚಟುವಟಿಕೆಯ ವಾಣಿಜ್ಯೀಕರಣವಲ್ಲ.
- ರಾಜ್ಯದಿಂದ ಪಿಪಿಪಿಯುಸಾಲವಾಗಿರುವುದಿಲ್ಲ.