ಧಾರವಾಡ ನಗರ ಅನಿಲ ವಿತರಣೆ

ಇಂಡಿಯನ್‌ ಆಯಿಲ್‌ – ಅದಾನಿ ಗ್ಯಾಸ್‌ ಪೈವೆಟ್‌ ಲಿಮಿಟೆಡ್‌ (ಐಒಎಜಿಪಿಎಲ್)‌ ಇಂಡಿಯನ್‌ ಆಯಿಲ್‌ ಕಾರ್ಪೋರೆಷನ್‌ ಲಿಮಿಟೆಡ್‌ ಮತ್ತು ಅದಾನಿ ಗ್ಯಾಸ್‌ ಲಿಮಿಟೆಡ್‌ನವರ ಒಂದು ಜಂಟಿ ಉದ್ಯಮ ಸಂಸ್ಥೆಯಾಗಿದ್ದು, ಅದು ಕೈಗಾರಿಕಾ, ವಾಣಿಜ್ಯ, ದೇಶೀಯ ಮತ್ತು ಸಾರಿಗೆ ವಲಯಗಳಲ್ಲಿ ಗ್ರಾಹಕರಿಗೆ ಸುರಕ್ಷಿತ, ಅನುಕೂಲಕರ, ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ ಇಂಧನವನ್ನು (ನೈಸರ್ಗಿಕ ಅನಿಲ) ಒದಗಿಸಲು ಭಾರತದಾದ್ಯಂತದ ವಿವಿಧ ನಗರಗಳಲ್ಲಿ ನೈಸರ್ಗಿಕ ಅನಿಲ ಹಂಚಿಕೆ ಜಾಲವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುತ್ತದೆ. ಪ್ರಸ್ತುತವಾಗಿಐಒಎಜಿಪಿಎಲ್ ಸಂಸ್ಥೆಯು ಒಟ್ಟು 9 ನಗರಗಳಾದ ಉಧಮ್ ಸಿಂಗ್ ನಗರ, ಅಲಹಾಬಾದ್, ಚಂಡಿಗಡ, ಪಾಣಿಪತ್, ಬುಲಂಶಹರ್, ಎರ್ನಾಕುಲಂ, ದಮನ್, ಧಾರವಾಡ ಮತ್ತು ದಕ್ಷಿಣ ಗೋವಾಗಳಲ್ಲಿ ನಗರ ಗ್ಯಾಸ್ ಹಂಚಿಕೆ (ಸಿಜಿಡಿ) ಜಾಲವನ್ನು ಸ್ಥಾಪಿಸಲುಐಒಎಜಿಪಿಎಲ್ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿಯ (ಪಿಎನ್‌ಜಿಆರ್‌ಬಿ) ನಿಂದ ಅಧಿಕಾರ ಪಡೆದುಕೊಂಡಿದೆ.

ಧಾರವಾಡ ಭೌಗೋಳಿಕ ಪ್ರದೇಶದಲ್ಲಿ ಸಿಜಿಡಿ ಜಾಲ ಸ್ಥಾಪಿಸಲು ದಿನಾಂಕ 14.09.2015 ರಂದು ಪಿಎನ್ಜಿಆರ್ಬಿಯವರುಐಒಎಜಿಪಿಎಲ್ ಸಂಸ್ಥೆಗೆ ಅನುಮೋದನೆಯನ್ನು ನೀಡಿದೆ.

ಐಒಎಜಿಪಿಎಲ್ ಸಂಸ್ಥೆಯು ಧಾರವಾಡ ಜಿಲ್ಲೆಯಲ್ಲಿ 2016 ರ ಆರಂಭದಲ್ಲಿ ತನ್ನ ಕಚೇರಿ ಮತ್ತು ಸಂಗ್ರಹ ಪ್ರಾಂಗಣವನ್ನು ಸ್ಥಾಪಿಸಿದೆ. ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ (ಹೆಚ್‌ಡಿಎಂಸಿ)ನಿಂದ ಅನಿಲ ಕೊಳವೆ ಮಾರ್ಗದ ಅನುಮತಿ ಪಡೆದ ನಂತರ ಫೆಬ್ರವರಿ-2017 ರಲ್ಲಿ ಕೆಲಸವನ್ನು ಪ್ರಾರಂಭಿಸಲಾಯಿತು.

ಐಒಎಜಿಪಿಎಲ್ ಸಂಸ್ಥೆಯು 2018-19 ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೊಳವೆ ನೈಸರ್ಗಿಕ ಅನಿಲ(ಪಿಎನ್‌ಜಿ) ಸಂಪರ್ಕವನ್ನು ಹುಬ್ಬಳ್ಳಿ-ಧಾರವಾಡದ ನಿವಾಸಿಗಳಿಗೆ ಒದಗಿಸುವ ಗುರಿ ಹೊಂದಿದೆ.

ಐಒಎಜಿಪಿಎಲ್ ಸಂಸ್ಥೆಯು ಧಾರವಾಡ ಭೌಗೋಳಿಕ ಪ್ರದೇಶದಲ್ಲಿಐದು ಕಾಂಪ್ರೆಸ್ಡ್ ನೈಸರ್ಗಿಕ ಅನಿಲ(ಸಿಎನ್‌ಜಿ) ಕೇಂದ್ರಗಳನ್ನು ಕಾರ್ಯಗತಗೊಳಿಸಿಸಿಎನ್‌ಜಿ ವಾಹನಗಳಅಗತ್ಯವನ್ನು ಪೂರೈಸುವಗುರಿ ಹೊಂದಿದೆ. ಸಿಎನ್‌ಜಿ ನಿಲ್ದಾಣವನ್ನು ಸ್ಥಾಪಿಸಲು ಸಮರ್ಥ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.