ಬೆಂಗಳೂರು ಜಿಲ್ಲೆ

ಟ್ರಂಕ್ ಪೈಪ್ ಲೈನ್

ಧಾಬೋಲ್ದಿಂದ ಬೆಂಗಳೂರಿಗೆ ಅನಿಲವನ್ನು ಸಾಗಿಸಲು ಸುಮಾರು 746 ಕಿ.ಮೀ.ಗಳ 16 ಎಂಎಂಎಸ್‌ಸಿಎಂಡಿವಿನ್ಯಾಸ ಸಾಮರ್ಥ್ಯವನ್ನು ಹೊಂದಿರುವ ಟ್ರಂಕ್ಪೈಪ್ಲೈನ್ವನ್ನು ಗೇಲ್‌ ಸಂಸ್ಥೆಯಿಂದ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಯಿತು. ಸದರಿ ಪೈಪ್ಲೈನ್ಕರ್ನಾಟಕದಒಂಬತ್ತು ಜಿಲ್ಲೆಗಳಾದಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಮತ್ತು ರಾಮನಗರಗಳಲ್ಲಿ ಅಳವಡಿಸಲಾಗಿದೆ. ರಾಜ್ಯದಲ್ಲಿ ಗೇಲ್‌ ಸಂಸ್ಥೆಯ ನೈಸರ್ಗಿಕ ಅನಿಲಪೈಪ್ಲೈನ್ಸಂಬಂಧಿಸಿದಂತೆಕೆಎಸ್‌ಐಐಡಿಸಿಯು ನೋಡಲ್‌ ಸಂಸ್ಥೆಯಾಗಿ ಪಾತ್ರವನ್ನು ಹೊಂದಿದೆ. ಪೈಪ್ಲೈನ್ದಿನಾಂಕ 18.02.2013 ರಂದು ಕಾರ್ಯಗೊಳಿಸಲಾಯಿತು.

ನಗರ ಅನಿಲ ವಿತರಣೆ

ಬೆಂಗಳೂರು ಪ್ರದೇಶದ ಸಿಜಿಡಿ ಸರಬರಾಜಿಗಾಗಿ ಪೆಟ್ರೋಲಿಯಂ & ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (PNGRB)ಯವರಸ್ಪರ್ಧಾತ್ಮಾಕ ಟೆಂಡರ್‌ ಮೂಲಕ ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆಯು ಯಶಸ್ವಿಯಾಗಿದೆ.

ಸಿಜಿಡಿ ಜಾಲವುನೈಸರ್ಗಿಕ ಅನಿಲವನ್ನು ಮನೆಗಳಿಗೆ, ಸಿಎನ್‌ಜಿ ವಾಹನಗಳಿಗೆ ಮತ್ತು ನಗರಗಳಲ್ಲಿ ವಾಣಿಜ್ಯ / ಕೈಗಾರಿಕಾ ಇಂಧನಗಳ ಅಗತ್ಯತೆಯನ್ನು ಪೂರೈಸುತ್ತದೆ.

  • 1. ಗೇಲ್ ಗ್ಯಾಸ್ ಲಿಮಿಟೆಡ್ ಬೆಂಗಳೂರು ಪ್ರದೇಶ ಸಿಜಿಡಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದು ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿಯ 4395 ಚದರ ಕಿ.ಮೀ. ವಿಸ್ತೀರ್ಣವನ್ನು ಒಳಗೊಂಡಿದೆ.
  • 2. ಆರಂಭಿಕ 5 ವರ್ಷಗಳ ಗುರಿ: 1583 ಇಂಚು-ಕಿಮೀ; 1.32 ಲಕ್ಷ ಪಿಎನ್‌ಜಿ ಸಂಪರ್ಕಗಳು.
  • 3. ಅಂದಾಜು ವೆಚ್ಚ: ರೂ 749 ಕೋಟಿ.